Wednesday, November 19, 2008

ಇಂದಿನಿಂದ ಏಕಲವ್ಯ ಕ್ರೀಡೋತ್ಸವ

Alva's organised state level pu level sports at Moodbidre.
details to be added.

ಮೂಡಬಿದ್ರೆಯಲ್ಲಿ ೫ ನೆ ಕರ್ನಾಟಕ ಮಿನಿ ಚಲನ ಚಿತ್ರೋತ್ಸವ

೫ನೇ ಕರ್ನಾಟಕ ಮಿನಿ ಚಲನ ಚಿತ್ರೋತ್ಸವ ನ. ೨೧ರಿಂದ
ಸುದ್ಧ-ಉದ್ಘಾಟನಾ ಚಿತ್ರ, ೧೫ ಚಿತ್ರಗಳ ಪ್ರದರ್ಶನ

ಮೂಡುಬಿದರೆ: ಯುವ ಪ್ರತಿಭಾ ವೇದಿಕೆಯ ಐದನೇಯ ಕರ್ನಾಟಕ ಮಿನಿಚಲನ ಚಿತ್ರೋತ್ಸವವು ನ ೨೧ರಿಂದ ೨೩ರವರೆಗೆ ಮೂಡುಬಿದಿರೆಯ ಅಮರಶ್ರೀ ಟಾಕೀಸ್‌ನಲ್ಲಿ ನಡೆಯಲಿದೆ. ಶ್ರೀ ಕಾಲೇಜ್ ವಿದ್ಯಾಸಂಸ್ಥೆಯ ಆತಿಥ್ಯದಲ್ಲಿ ಉತ್ಸವ ಆಯೋಜಿತವಾಗಿದ್ದು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಮಿಂಚಿದ ಪಿ.ಎನ್.ರಾಮಚಂದ್ರ ಅವರ ಸುದ್ಧ ಉದ್ಘಾಟನಾ ಚಿತ್ರದ ಗೌರವವನ್ನು ಪಡೆದಿದೆ ಎಂದು ಸಂಘಟಕ, ಶ್ರೀ ಕಾಲೇಜ್ ಸ್ಥಾಪಕ ಶೇಖರ ಅಜೆಕಾರು ತಿಳಿಸಿದ್ದಾರೆ.
ನಾಲ್ಕಾರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡ ಮಕ್ಕಳ ಚಲನಚಿತ್ರ, ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶಿತವಾಗುತ್ತಿರುವ, ಮಂಗಳೂರಿನ ಅಭಯಸಿಂಹ ಅವರ ಚಿತ್ರ ಗುಬ್ಬಚ್ಚಿಗಳು, ಅಕ್ಕು ಖ್ಯಾತಿಯ ಪ್ರಕಾಶ್ ಸುವರ್ಣ ಕಟಪಾಡಿ ಅವರ ಗುಡ್ಡದ ಮನೆ ಮೂರು ದೀರ್ಘ ಚಿತ್ರಗಳು ಮತ್ತು ೧೩ ಕಿರುಚಿತ್ರಗಳು ಪ್ರದರ್ಶಿತವಾಗಲಿವೆ. ಟೈಂಸ್ ಆಫ್ ಇಂಡಿಯಾದ ಚಿತ್ರಕಲಾವಿದ ಪ್ರಕಾಶ್ ಬಾಬು ಅವರ ಪೂರ್ವ ದಿಕ್ಕಿನ ಗಾಳಿ ಕೇರಳ ಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದು ಇಲ್ಲಿ ಪ್ರದರ್ಶಿತವಾಗಲಿದೆ. ಪ್ರಕಾಶ ಬಾಬು ಅವರ ಮುಂಗಾರು ಮುಗಿಲು, ತ್ರಿಮಂಥ್ಸ್ ಆಫ್ ಸಾಲಿಟ್ಯೂಡ್, ಅಭಯ ಸಿಂಹದ ನಾಲ್ಕು ಕಿರುಚಿತ್ರಗಳು, ಕಾರ್ತಿಕ್ ಪರಾಡ್ಕರ್ ಅವರ ದಿ ಸಿಕ್ರೆಟ್ಸ್ ಆಫ್ ಸೈಲೆನ್ಸ್, ಪ್ರಕಾಶ್ ಕಾಬೆಟ್ಟು ಅವರ ವನದೇವತೆ ಸುಮಂತ್ ಭಟ್ ನಿರ್ದೇಶನದ ದ್ವಂದ್ವ ಚಿತ್ರಗಳು ಪ್ರದರ್ಶಿತವಾಗಲಿದೆ.

ವಿಶೇಷ ವಿಭಾಗ: ಪ್ರತಿಭಾನ್ವಿತ ಯುವ ನಿರ್ದೇಶಕ ಮಂಗಳೂರಿನ ಅಭಯಸಿಂಹ ಅವರ ನಾಲ್ಕು ಕಿರುಚಿತ್ರಗಳು ಚಿತ್ರೋತ್ಸವ ವಿಶೇಷ ವಿಭಾಗದಲ್ಲಿ ಪ್ರದರ್ಶಿತವಾಗುತ್ತಿವೆ. ತುಳುರಂಗಭೂಮಿಯ ಖ್ಯಾತ ನಟ ನವೀನ್ ಪಡೀಲ್ ನಟಿಸಿರುವ ವಾಚ್ ಔಟ್ ಕೂಡಾ ಇದರಲ್ಲಿ ಸೇರಿದೆ.

ಸಂವಾದ: ಉದ್ಘಾಟನಾ ದಿನ ಸುದ್ಧ ಚಿತ್ರದ ಕಲಾವಿದರಾದ ಸುಭಾಶ್ಚಂದ್ರ ಪಡಿವಾಳ್, ಭೋಜ ಶೆಟ್ಟಿ, ಶಾರದಾದೇವಿ, ಗೋಪಾಲ್ ಅವರೊಂದಿಗೆ ಚಿತ್ರದ ಬಳಿಕ ಸಂವಾದವಿದೆ.

ಪ್ರವೇಶ ಉಚಿತ: ಮೂರು ದಿನ ಬೆಳಿಗ್ಗೆ ೯.೦೦ರಿಂದ ಮಧ್ಯಾಹ್ನದವರೆಗೆ ಪ್ರದರ್ಶನಗಳಿದ್ದು ಉಚಿತ ಪ್ರವೇಶವಿದೆ. ಸುತ್ತಮುತ್ತಲಿನ ೧೬ ಶಾಲೆ, ಹೈಸ್ಕೂಲು, ಕಾಲೇಜುಗಳ ಸುಮಾರು ೧೫೦೦ ಮಕ್ಕಳು ಭಾಗವಹಿಸಲಿರುವರು. ಪ್ರದರ್ಶನ ಎಲ್ಲಾ ವಯೋಮಾನದವರಿಗೂ ತೆರೆದಿದೆ, ಮಕ್ಕಳಿಗೆ ಮಾತ್ರ ಅಲ್ಲ.
* ಉಚಿತ ಪಾಸ್‌ಗಳಿಗಾಗಿ ಮತ್ತು ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ ಶೇಖರ ಅಜೆಕಾರು, ಶ್ರೀ ಕಾಲೇಜ್, ಕಛೇರಿ, ಕಾಮರ್ ಮಂಜ್, ಮೂಡುಬಿದಿರೆ-೫೭೪೨೨೭.
ಮೊಬೈಲ್: ೯೩೪೨೪೮೪೦೫೩ ಅಥವಾ tuluva@gmail.com, www.shreecollege.blogspot.com