Friday, June 19, 2009

ಶ್ರೀ ಕಾಲೇಜ್ ಕಾಳಜಿ ಮೂಡುಬಿದಿರೆ ಕೆ.ಎಸ್.ಆರ್.ಟಿ.ಸಿ ಗೆ ದೂರವಾಣಿ ಕೊಡುಗೆ



ಶ್ರೀ ಕಾಲೇಜ್ ಕಾಳಜಿ ಯೋಜನೆ
ಮೂಡುಬಿದಿರೆ ಕೆ.ಎಸ್.ಆರ್.ಟಿ.ಸಿ ಗೆ ದೂರವಾಣಿ ಕೊಡುಗೆ
ಮೂಡುಬಿದಿರೆ: ಮೂಡುಬಿದಿರೆಯ ಶ್ರೀ ಕಾಲೇಜ್ ಸಂಸ್ಥೆಯ ಶ್ರೀ ಕಾಲೇಜ್ ಕಾಳಜಿ ಯೊಜನೆಯ ಈ ವರ್ಷದ ಎರಡನೇ ಕಾರ್ಯ ಕ್ರಮವಾಗಿ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮೂಡುಬಿದಿರೆ ಕೇಂದ್ರಕ್ಕೆ ಉಚಿತ ದೂರವಾಣಿ ಕೊದುಗೆಯ ಹಸ್ತಾಂತರ ಶುಕ್ರವಾರ ನದೆಯಿತು.
ಉಜಿರೆ ಡಿಪೊದ ಸಹಾಯಕ ಕಾರ್ಯ ಅಧೀಕ್ಷಕರಾದ ಮಹೇಶ್ವರಪ್ಪ ಅವರು ಮೊದಲ ಕರೆ ಮಾಡಿ ದೂರವಾಣಿಗೆ ಚಾಲನೆ ನೀಡಿದರೆ ಪುರಸಭೆಯ ಸದಸ್ಯ ಎಮ್.ರತ್ನಾಕರ ದೇವಾಡಿಗ ದೂರವಾಣಿಯನ್ನು ಸಂಚಾರ ನಿಯಂತ್ರಕ ಗುರುರಾಜ್ ಅವರಿಗೆ ಹಸ್ತಾಂತರಿಸಿದರು.ತೋಟದಮನೆ ಸಂಜೀವ ಶೆಟ್ಟಿ ಮತ್ತು ಮಕ್ಕಳು ಈ ಯೋಜನೆಯ ಈ ತಿಂಗಳ ಪ್ರಾಯೋಜಕರು.
ಶ್ರೀ ಕಾಲೇಜ್‌ನ ಮುಖ್ಯಸ್ಥ ಶೇಖರ ಅಜೆಕಾರು ,ಸನ್ನಿದಿ ಇನ್ಸ್ಟಿಟ್ಯುಟ್‌ನ ಮುಖ್ಯಸ್ಥ ಸುನೀಲ್ ಕುಮಾರ್, ಅಕ್ಷಯ ಸಿ.ಡಿ. ಸೆಂಟರ್‌ನ ರಾಧಾಕ್ರಿಷ್ಣ ಶೆಟ್ಟಿ, ರೂಪೇಶ ಎಂ, ಮುಖ್ಯ ಅಥಿತಿಗಳಾಗಿದ್ದರು.