ಪುತ್ತಿಗೆ ವಾಳ್ಯದ ಬೆಳ್ಳಿಹಬ್ಬ ದಿನಾಂಕ: ೨೯-೦೩-೨೦೦೮ ಪುಟ್ಟ ಊರು ಶಕ್ತಿಪುರವನ್ನು ಕೇಂದ್ರವಾಗಿರಿಸಿ ಕಾರ್‍ಯನಿರ್ವಹಿಸುತ್ತಿರುವ ಪುತ್ತಿಗೆ ವಾಳ್ಯಕ್ಕೆ ಈಗ ಬೆಳ್ಳಿ ಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ವಾಳ್ಯ ಮತ್ತು ಸಮಾಜ ಬೆಳೆದು ಬಂದ ಬಗೆಗೆ ಒಂದು ಪುಟ್ಟ ವರದಿ. ಜಾನಪದ ಸಂಪ್ರದಾಯವನ್ನು ಉಳಿಸಿಕೊಂಡ ಕೆಲವೇ ಸಮೂದಾಯಗಳಲ್ಲಿ ಕುಡುಬಿ ಸಮುದಾಯವೂ ಒಂದಾಗಿದೆ. ಈ ಕುಡುಬಿ ಸಮಾಜದ ಆಸ್ತ್ತಿತ್ವವನ್ನು ಸಾರುವಂತಹ ಸಂಘಟನೆಯನ್ನು ವಾಳ್ಯ ಎಂಬ ಹೆಸರಿನಿಂದ ಗುರುತಿಸುತ್ತೇವೆ. ಶ್ರೀ ಮಹಾದೇವಿ ಜಾನಪದ ನೃತ್ಯ ಮಂಡಳಿಯು ನೂರಾರು ವರ್ಷಗಳ ಹಿಂದೆಯೇ ಅಸ್ತಿತ್ವದಲ್ಲಿತ್ತು. ದಾಖಲೆಗಳ ಪ್ರಕಾರ ಶಕ್ತಿಪುರ ನೃತ್ಯ ಮಂಡಳಿಯನ್ನು ೧೯೨೪ರಲ್ಲಿ ಸ್ಥಾಪಿಸಿ ೧೯೬೦ರವರೆಗೆ ದಿ ದಾಮು ಗೌಡರು ಶಕ್ತಿಪುರದಲ್ಲಿ ಮುನ್ನಡೆಸಿದರು. ಅವರ ಬಳಿಕ ದಿ ರಾಮಗೌಡರು ೧೯೬೦ರಿಂದ ೧೯೮೫ರವರೆಗೆ ನಮ್ಮ ವಾಳ್ಯದ ನೇತೃತ್ವ ವಹಿಸಿದ್ದರು. ೧೯೮೫ರಿಂದ ೨೦೦೦ದವರೆಗೆ ದಿ ಗೋಪಾಲ ಗೌಡರು ಮುನ್ನಡೆಸಿದರು. ಅವರ ಕಾಲಾ ನಂತರ ಈಗಿನವರೆಗೆ ಶ್ರೀಯುತ ಲೋಕಾನಾಥ ಗೌಡ ಗುರಿಕಾರರಾಗಿ ಕಾರ್‍ಯ ನಿರ್ವಹಿಸುತ್ತಾ ವಾಳ್ಯವನ್ನು ಸಂಘಟಿಸುತ್ತಿದ್ದಾರೆ. ೧೯೮೩ರಲ್ಲಿ ನಮ್ಮ ಕುಡುಬಿ ಸಂಪ್ರದಾಯದಂತೆ ಪುತ್ತಿಗೆ ವಾಳ್ಯ ಸ್ಥಾಪನೆಗಾಗಿ ಕುಡುಬಿ ಸಮುದಾಯದ ಮೂಲ ಮಠವಾದ ಗೋವಾ ಕಾಣಕೋಣ ಮಠಕ್ಕೆ ದಿ ರಾಮಗೌಡ ಶಕ್ತಿಪುರ ಮತ್ತು ದಿ ಅಪ್ಪುಗೌಡ ಬೀಡು ಇವರ ನೇತೃತ್ವದಲ್ಲಿ ದಿ ಗೋಪಾಲಗೌಡ, ಶಕ್ತಿಪುರ ರಾಯಬಾರಿ, ದಿ ಸಿದ್ದಪ್ಪ ಗೌಡ, ಮಂತ್ರವಾದಿ ದಿ ಹೊಮಯ್ಯ ಗೌಡ ನೆಕರ್ ತೋಡು ಬೆಟ್ಟ್ಟು, ಹೊಮಯ್ಯಗೌಡ ಮುಲ್ಲಗುಡ್ಡೆ, ಜೋಗೇರಿ ಮೋನುಗೌಡ, ನಾರಾಯಣ ಗೌಡ ಶಾಂತಿಪಲ್ಕೆ, ಶ್ರೀನಿವಾಸ ಗೌಡ ಬೀಡು, ದಿ ವೆಂಕಪ್ಪ ಗೌಡ ಬೆರ್ಕೆ, ದಿ ಅಣ್ಣುಗೌಡ ಎದುರುಗುಡ್ಡೆ, ದಿ ನೋಣುಗೌಡ ಬೀಡು ಮತ್ತು ವಾಳ್ಯದ ಹಿತೈಸಿ ದಿ ಬಾಬುಗೌಡ ಪುತ್ತಿಗೆಪದವು ಮೊದಲಾದವರು ತೆರಳಿ ವಾಳ್ಯ ಸ್ಥಾಪನೆಗೆ ಅನುಮತಿ ಪಡೆಯಲಾಯಿತು. ಸರ್ವರ ಸಹಕಾರದೊಂದಿಗೆ ತಾ:೨೪-೦೩-೧೯೮೩ರ ದಿವಾ ಗಂಟೆ ೮:೩೦ಕ್ಕೆ ನಮ್ಮ ಕುಲ ಪುರೋಹಿತರಾದ ಕೃಷ್ಣ ಭಟ್ಟ್ ಗುಂಡ್ಯಡ್ಕ ಇವರ ನೇತೃತ್ವದಲ್ಲಿ ಶ್ರೀ ಮಲ್ಲಿಕಾರ್ಜುನ ದೇವರ ಚರಣಗಳಿಗೆ ವಂದಿಸಿ ಪಡೆದ ವಿಳ್ಯಾದಿ ಪ್ರಸಾದವನ್ನು ಪುತ್ತಿಗೆ ಶಕ್ತಿಪುರ ಎಂಬಲ್ಲಿ ಹತ್ತು ಸಮಸ್ತರ ಸಮ್ಮುಖದಲ್ಲಿ ಸ್ಥಾಪಿಸಲಾಯಿತು. ಅಂದಿನಿಂದ ಶಕ್ತಿಪುರ ಶ್ರೀ ಮಹಾದೇವಿ ಜಾನಪದ ನೃತ್ಯ ಮಂಡಳಿ ಎಂದು ನಾಮಕರಣ ಗೊಂಡಿದೆ. ನಿರಂತರವಾಗಿ ಹೋಳಿ ಹಬ್ಬವನ್ನು ಆಚರಿಸಿಕೊಂಡು ಇದೀಗ ಬೆಳ್ಳಿ ಹಬ್ಬದ ಶುಭ ಸಂದರ್ಭದಲ್ಲಿ, ಹೋಳಿ ಆಚರಣೆಯ ಬಗ್ಗೆ ಸಂಕ್ಷಿಪ್ತವಾಗಿ ಹೇಳಲು ಇಷ್ಟ ಪಡುತ್ತೇನೆ. ಸಾಂಪ್ರದಾಯಿಕವಾಗಿ ನಡೆಯುವ ಹೋಳಿಹಬ್ಬದ ವಿದ್ಯುಕ್ತವಾದ ಆರಂಭ ಮಹಾಶಿವರಾತ್ರಿಯಂದು ಮೊದಲ್ಗೊಂಡು ೧೫ ದಿನಗಳ ಕಾಲ ತರಬೇತಿ ನಡೆಯುತ್ತದೆ. ತದ ನಂತರ ಹುಣ್ಣಿಮೆಯಂದು ಗುರಿಕಾರನ ಮನೆಯಲ್ಲಿ ವಾಳ್ಯದ ಸದಸ್ಯರೆಲ್ಲ ಒಟ್ಟು ಸೇರಿ ಧ್ವಜಾರೋಹಣ ನಡೆಸಿ, ದಿನ ನಿಗದಿಪಡಿಸುತ್ತಾರೆ. ಈ ಸಮಯದಲ್ಲಿ ಪ್ರತಿ ಮನೆಯವರು ತಪ್ಪದೆ ಗುರಿಕಾರನ ಮನೆಯಲ್ಲಿ ಸೇರಿರುತ್ತಾರೆ. ಗುಮ್ಮಟ ನೃತ್ಯದಲ್ಲಿ ರಾಮಾಯಣ ಹಾಗೂ ಮಹಾಭಾರತದ ಕಥೆಯನ್ನು ನಿಖರವಾಗಿ ಹೇಳಲಾಗುತ್ತದೆ. ಕೋಲಾಟದಲ್ಲಿಯೂ (ಸೇತುಬಂದ) ಎನ್ನುವ ರಾಮಾಯಣದ ಒಂದು ಪ್ರಕಾರವನ್ನು ಬಿಂಬಿಸುತ್ತದೆ. ಓಕುಳಿಯಲ್ಲಿ ಮಿಂದು ಕಾಮದಹನದೊಂದಿಗೆ ಹೋಳಿ ಹಬ್ಬವನ್ನು ಸಮಾಪ್ತಿಗೊಳಿಸುತ್ತೇವೆ. ಆ ಶುಭದಿನದಂದು ದ.ಕ. ಜಿಲ್ಲೆಯ ಎಲ್ಲಾ ವಾಳ್ಯಗಳನ್ನು ಆಮಂತ್ರಿಸಿ ಅವರ ನೃತ್ಯಕ್ಕೂ ಅವಕಾಶಕೊಟ್ಟು ಪ್ರೋತ್ಸಾಹಿಸುತ್ತೇವೆ. ಅಲ್ಲದೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತೇವೆ. ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲೆಯ ಹಲವಾರು ತಂಡಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿವೆ. ಭಾಗವಹಿಸಿರುವ ಎಲ್ಲಾ ತಂಡಗಳಿಗೂ ನಮ್ಮ ಬೆಳ್ಳಿ ಹಬ್ಬದ ಸ್ಮರಣಿಕೆಯನ್ನು ನೀಡಿ ಗೌರವಿಸಿದ್ದೇವೆ. ಅನಿವಾರ್ಯ ಕಾರಣಗಳಿಂದ ಓಕುಳಿಯಂದು ಭಾಗವಹಿಸದೆ ಇರುವ ತಂಡಗಳಿಗೆ ಇಂದಿನ ಈ ಶುಭ ಸಂದರ್ಭದಲ್ಲಿ ತಮ್ಮ ಪ್ರತಿಭೆಗೆ ಅವಕಾಶವನ್ನು ಕೊಡುತ್ತೇವೆ. ಹಾಗೂ ಅವರಿಗೆ ಬೆಳ್ಳಿ ಹಬ್ಬದ ಸ್ಮರಣಿಕೆಯನ್ನು ನೀಡಿ ಗೌರವಿಸುತ್ತೇವೆ.
ಈ ಶುಭ ಸಂದರ್ಭದಲ್ಲಿ ನಮ್ಮ ಮಂಡಳಿಯ ಸಾಧನೆಯನ್ನು ಹೇಳಲು ಇಷ್ಟ ಪಡುತ್ತೇನೆ. ೧. ೨೪-೦೯-೧೯೮೬ - ೨೮-೦೯-೧೯೮೬ರವರೆಗೆ ನೆಹರು ಯುವ ಕೇಂದ್ರ ಕರ್ನಾಲು (ಹರಿಯಾನ)ದಲ್ಲಿ ನಡೆದ ಓಚಿಣioಟಿಚಿಟ Iಟಿಣigಡಿಚಿಣioಟಿ ಅಚಿmಠಿ ನಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದೆ. ೨. ೧೯೮೦-೮೧, ೮೨, ೮೫ನೇ ವರ್ಷದಲ್ಲಿ ಶಿಕ್ಷಣ ಮತ್ತು ಸಾಂಸ್ಕೃತಿಕ ಸಚಿವಾಲಯ ವತಿಯಿಂದ, ನೆಹರು ಯುವ ಕೇಂದ್ರ ಮಂಗಳೂರು ಇಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ಜಾನಪದ ಮೇಳದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದೆ. ೩. ೧೦-೦೨-೧೯೯೧ ಕೊಂಪದವು ವತಿಯಿಂದ ಕಡಂದಲೆಯಲ್ಲಿ ನಡೆದ ಕಲಾಮೇಳದಲ್ಲಿ ಪ್ರಶಸ್ತಿ ಪಡೆದಿದೆ. ೪. ೧೯೭೭ -೭೮ ಕುಡುಬಿ ಸಮಾಜ ಸೇವಾ ಸಂಘ ಕೊಂಪದವು ಇಲ್ಲಿ ಕೋಲಾಟ ಸ್ಪರ್ಧೆಯಲ್ಲಿ ಪ್ರಥಮ ೫. ೧೯೭೮-೭೯ ದ.ಕ. ಜಿಲ್ಲಾ ಮಟ್ಟದ ಕುಡುಬಿ ಸಮಾಜ ಸೇವಾ ಸಂಘ ಮಿಜಾರು, ಕೋಲಾಟ ಪ್ರಥಮ ಹಾಗೂ ಇನ್ನೂ ಹತ್ತು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಅಲ್ಲದೆ ನೂರಾರು ಸಾರ್ವಜನಿಕ ಪ್ರದರ್ಶಗಳನ್ನು ನೀಡಿರುತ್ತೇವೆ. ಹಿರಿಯರಿಂದಾಗಿ ಬಳುವಳಿಯಾಗಿ ಬಂದ ಈ ಸಾಂಪ್ರಾದಾಯಿಕ ಜಾನಪದ ಆಚರಣೆಯನ್ನು ಇಂದಿನ ಯುವ ಪೀಳಿಗೆ ಉಳಿಸಿಕೊಂಡು ಬರುವ ಅಗತ್ಯತೆಯಿದೆ. ಸಂಪ್ರದಾಯವನ್ನು ಉಳಿಸುತ್ತಲೆ ನಾವು ಅಧುನಿಕತೆಯ ಅಗತ್ಯತೆಯತ್ತ ಹೆಜ್ಜೆ ಹಾಕೋಣ ಎನ್ನುವ ಆಶಯವನ್ನು ವ್ಯಕ್ತ ಪಡಿಸುತ್ತಾ ಈ ಕಿರು ವರದಿವಾಚನವನ್ನು ಮುಗಿಸುತ್ತೇವೆ.
Puttige shakthipura Kudubi Valya a report by secretory

No comments:
Post a Comment