Thursday, September 9, 2010

ಜೈನ ಸ್ವಾಮಿಜಿ ಮತ್ತೆ ಅಮೇರಿಕಾಕ್ಕೆ


ಜೈನ ಸ್ವಾಮಿಜಿ ಮತ್ತೆ ಅಮೇರಿಕಾಕ್ಕೆ

ಮೂಡುಬಿದಿರೆಯ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿ ಅವರು ಅಮೇರಿಕಾದ ನ್ಯೂಜೆರ್ಸಿಯ ಸಮಾಜ ಭಾಂಧವರ ಕರೆಯಂತೆ ಸೆಪ್ಟಂಬರ್ ೧೦ ರಿಂದ ಮತ್ತೊಮ್ಮೆ ಧಾರ್ಮಿಕ ಸಂದೇಶದ ವಿದೇಶ ಪ್ರವಾಸ ಕೈಗೊಳ್ಳಲಿರುವರು ಎಂದು ಮಠದ ಪ್ರಕಟಣೆ ತಿಳಿಸಿದೆ.
ಅವರು ಅಲ್ಲಿ ನಡೆಯಲಿರುವ ದಶಲಕ್ಷಣ ಮಹಾ ಪರ್ವದ ವಿಧಿ ವಿಧಾನಗಳನ್ನು ಧಾರ್ಮಿಕ ಆಚರಣೆಯೊಂದಿಗೆ ನಡೆಸಿ ಕೊಡಲಿರುವರು ಮತ್ತು ಅಲ್ಲಿನ ಅಸಂಖ್ಯ ಭಾರತೀಯ ಜಿನ ಧರ್ಮೀಯರಿಗೆ ದರ್ಶನ ಮತ್ತು ಆಶೀರ್ವಚನ ನೀಡಲಿರುವರು.
ಇದು ಅವರ ೨೦ ನೇ ವಿದೇಶ ಪ್ರವಾಸವಾಗಿದ್ದು ಅಮೇರಿಕಾಕ್ಕೆ ೮ ನೇ ಧಾರ್ಮಿಕ ಪ್ರವಾಸವಾಗಿರುವುದು.
ಸಾಹಿತ್ಯ, ಸಂಸ್ಕ್ರತಿ ಗಳ ಬಗೆಗೆ ಅಪಾರ ಪ್ರೀತಿ ಹೊಂದಿರುವ ಅವರು ಮಠದಲ್ಲೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ಸಾಹಿತಿಗಳನ್ನು ಧಾರ್ಮಿಕ ನಾಯಕರನ್ನು ಕರೆಸಿ ಕೊಳ್ಳುತ್ತಾರೆ.
ವಿಶೇಷ ಧಾರ್ಮಿಕ ಆಧಾರದ ಮೇಲೆ ಜೈನರು ೨೨೦೦ ವರ್ಷಗಳಿಂದ ಭಾದ್ರಪದ ಚೌತಿಯನ್ನು ಪರ್ಯಾಶನ ಹಬ್ಬವಾಗಿ ಆಚರಿಸುತ್ತಾ ಬಂದಿದ್ದಾರೆ.
ಕಮರ್ ಪಾಲ್ ಎ.ಶಹಾ ಅದ್ಯಕ್ಷರಾಗಿ ಮತ್ತು ಬಕುಲ್ ಶಹಾ ಕಾರ್ಯದರ್ಶಿಯಾಗಿ ಅಲ್ಲಿನ ಜೈನ ಸಮಾಜವನ್ನು ಮುನ್ನಡೆಸುತ್ತಾ ಬಂದಿದ್ದಾರೆ.
ಆಗಸ್ಟ್ ತಿಂಗಳಲ್ಲೂ ಸ್ವಾಮಿಜಿ ಅವರು ಅಮೇರಿಕಾದಲ್ಲಿ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

No comments: